ಇರಾವಾಡಿ
ಬರ್ಮಾದ ಪ್ರಮುಖ ನದಿ. ಅಸ್ಸಾಮಿನ ಈಶಾನ್ಯ ತುದಿಯಲ್ಲಿ, ಟಿಬೆಟ್ಟಿನ ಗಡಿಯಲ್ಲಿ. 15,000-19,000 ಎತ್ತರದ ಪರ್ವತ ಪ್ರದೇಶದಲ್ಲಿ ಇದರ ಉಗಮ. ಸರಿಸುಮಾರಾಗಿ ಉತ್ತರ-ದಕ್ಷಿಣ ಮಾರ್ಗವಾಗಿ ಬರ್ಮಾದ ಉದ್ದಕ್ಕೂ ಸು. 2,400 ಕಿ.ಮೀ. ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಸಮುದ್ರವನ್ನು ಸೇರುವಾಗ ಸುಮಾರು 12 ಕವಲುಗಳಾಗಿ ಒಡೆಯುತ್ತದೆ. ನದೀಮುಖಜಭೂಮಿ ಬಹು ಫಲವತ್ತಾದ ಪ್ರದೇಶ. ಸುಮಾರು 1,58,000 ಚ.ಮೈ. ಹರಡಿರುವ ಈ ಪ್ರದೇಶದಲ್ಲಿ ಉತ್ಕøಷ್ಟ್ರ ಬತ್ತ ಬೆಳೆಯುತ್ತದೆ. ಮಿಟ್‍ಕೈನದಿಂದ ಕೆಲವು ಕಿಲೊಮೀಟರುಗಳ ಮುಂದೆ ನದಿ ಸುಮಾರು 1 ಕಿ.ಮೀ. ಅಗಲವಾಗೂ 30 ಗಳಷ್ಟು ಆಳವಾಗೂ ಇದ್ದು ನೌಕಾಸಂಚಾರಕ್ಕೆ ಅನುಕೂಲವಾಗಿದೆ. ಬಸ್ಸೇನ್ ಮತ್ತು ರಂಗೂನ್ ನದಿಗಳನ್ನು ಇರಾವಾಡಿ ನದಿಗೆ 1833ರಲ್ಲಿ ಕಾಲುವೆಯ ಮೂಲಕ ಜೋಡಿಸಲಾಯಿತು. ದೊಡ್ಡ ಹಡಗುಗಳ ಸಂಚಾರಕ್ಕೆ ಇದನ್ನು 1983-35ರಲ್ಲಿ ವಿಸ್ತರಿಸಲಾಯಿತು. ಇಂದು ಇರಾವಾಡಿ ನದಿ ಬರ್ಮಾದ ಪ್ರಮುಖ ವಾಣಿಜ್ಯಮಾರ್ಗವಾಗಿ ಬರ್ಮಾದ ಆರ್ಥಿಕ ಪ್ರಗತಿಯ ಬೆನ್ನೆಲುಬಾಗಿದೆ. ಬಸ್ಸೇನ್, ರಂಗೂನ್, ಹೆಂಜಾದ, ಮಗ್ವೆ, ಪಕೊಕೊ, ಭಾಮೊ ಮುಂತಾದುವು ಇದರ ದಡದಲ್ಲಿರುವ ಪ್ರಮುಖ ಪಟ್ಟಣಗಳು.
(ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ